ಸಮೀಕ್ಷೆ ಸಂದರ್ಭದಲ್ಲಿ ತಪ್ಪದೇ ಧನಗರ ಗೌಳಿ ಎಂದೇ ನಮೂದಿಸಿ: ಶ್ರೀ ಸಿದ್ದು ಥೋರತ್ – ಸಂಪಾದಕರು

ಪ್ರಸ್ತುತ ಕರ್ನಾಟಕ ರಾಜ್ಯ ಸರ್ಕಾರವು ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025 ಇದರ ಬಗ್ಗೆ ನಮಗೆ ಮಾಹಿತಿ ಇದೆ. ಇದಕ್ಕೆ ಸಂಬಂಧಿಸಿದಂತೆ ನಮ್ಮ ಸಮಾಜದ ಸಭೆಗಳನ್ನು ದಿನಾಂಕ 31.8.2025ರಂದು ಮುಂಡಗೋಡ ಹಾಗು ದಿನಾಂಕ 14.9.2025ರಂದು ಕಿರವತ್ತಿಯಲ್ಲಿ ನಡೆದಿವೆ. ಈ ಸಭೆಗಳು ರಾಜ್ಯದ ಸಂಘ-ಸಂಸ್ಥೆಗಳ ಪದಾಧಿಕಾರಿಗಳ, ಸಮಾಜದ ಮುಖಂಡರ ಹಾಗು ಗುರುಹಿರಿಯರ ನೇತೃತ್ವದಲ್ಲಿ ನಡೆಸಲಾಯಿತು. ಈ ಮಹತ್ವದ ಸಭೆಗಳಲ್ಲಿ ಈ ಕೆಳಗಿನಂತೆ ತೀರ್ಮಾನಗಳನ್ನು ತೆಗೆದುಕೊಳ್ಳಲಾಯಿತು.
ಈ ಸಭೆಗಳ ಒಕ್ಕೊರಲ ತೀರ್ಮಾನದಂತೆ ಕರ್ನಾಟಕ ರಾಜ್ಯ ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾದರಿ ನಮೂನೆ ಫಾರಂನಲ್ಲಿ ಇರುವ ಈ ಕ್ರಮ ಸಂಖ್ಯೆಗಳ ಮುಂದೆ ಈ ರೀತಿಯಾಗಿ ನಮೂದಿಸಲು ತೀರ್ಮಾನಿಸಲಾಗಿದೆ.

                                          ಕರ್ನಾಟಕ ಸರ್ಕಾರ
                     ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ
                           ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025

ಧರ್ಮದ ಕಾಲಂನಲ್ಲಿ – ಹಿಂದು
ಜಾತಿ ಕಾಲಂನಲ್ಲಿ – ಧನಗರ ಗೌಳಿ
ಉಪಜಾತಿ ಕಾಲಂನಲ್ಲಿ – ಗೌಳಿ
ಪರ್ಯಾಯ ಪದ ಕಾಲಂನಲ್ಲಿ – ಧನಗರ ಗೌಳಿ
ಪಾರಂಪಾರಿಕ ಕುಲಕಸುಬು ಕಾಲಂನಲ್ಲಿ- ಪಶುಪಾಲನೆ
ಕುಲಕಸುಬು ಮುಂದುವರೆದಿದೆಯೆ – ಹೌದು
ಈ ಮೇಲಿನ ಮಾಹಿತಿಯನ್ನು ಸಮೀಕ್ಷೆಯ ಸಂದರ್ಭದಲ್ಲಿ ತಪ್ಪದೇ ನಮೂದಿಸಬೇಕು.

ಸೂಚನೆ: ಸಮೀಕ್ಷೆ ಕಾರ್ಯವು ಸೆಪ್ಟಂಬರ್ 22 ರಿಂದ ಅಕ್ಟೋಬರ್ 7ರ ವರೆಗೆ ನಡೆಯಲಿದೆ.

Leave a Comment

Your email address will not be published. Required fields are marked *

Scroll to Top